- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೆಚ್.ಎನ್.ವಿಜಯ್ ಕುಮಾರ್ ಹುಟ್ಟುಹಬ್ಬ ದ ಸಂಭ್ರಮ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ

ಚಾಮರಾಜನಗರ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು, ಉದ್ಯಮಿ ಹೆಚ್.ಎನ್.ವಿಜಯ್ ಕುಮಾರ್ ಅವರು ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಕೇಕ್ ಕತ್ತರಿ ಹಂಚುವ ಮೂಲಕ ಆಚರಿಸಿಕೊಂಡರು.
ನಗರದ ಗುಂಡ್ಲುಪೇಟೆ ರಸ್ತೆಯಲ್ಲಿರುವ ಶ್ರೀ ಬಣ್ಣಾರಿ ಅಮ್ಮನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಅಭಿಮಾನಿ ಬಳಗ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಅಚರಿಸಿಕೊಂಡರು. ಅವರಿಗೆ ಅಭಿಮಾನಿಗಳು ದೊಡ್ಡಗಾತ್ರದ ಮೈಸೂ
ರುಪೇಟ ಧರಿಸಿ, ಶಾಲು ಹೊದಿಸಿ ಗುಲಾಬಿ ಹೂವಿನ ಹಾರ ಹಾಕಿ ಸನ್ಮಾನಿಸಿ ಹುಟ್ಟುಹಬ್ಬದ ಶುಭಾಶಯ ಕೋರಿದರು.
ಅಭಿಮಾನಿ ಬಳಗ ರಾಜ್ಯಾಧ್ಯಕ್ಷ ಬಾಗಳಿರೇವಣ್ಣ ಮಾತನಾಡಿ, ಹೆಚ್.ಎನ್.ವಿಜಯಕುಮಾರ್ ಅವರು ಮೂಡಾಧ್ಯಕ್ಷರಾಗಿ, ಜಿ.ಪಂ.ಸದಸ್ಯರಾಗಿ ಸೇವೆ ಸಲ್ಲಿಸಿ ಜನಪರ ಕೆಲಸ ಮಾಡಿದ್ದಾರೆ. ಅವರಿಗೆ ಭಗವಂತ ಹೆಚ್ಚಿನ ಆರೋಗ್ಯ, ಆಯಸ್ಸು ಕರುಣಿಸಿ, ಮುಂದಿನ ದಿನಗಳಲ್ಲಿ ಯಾವುದಾದರೂ ಒಂದು ಕ್ಷೇತ್ರದಿಂದ ಟಿಕೆಟ್ ದೊರೆತು ಶಾಸಕರಾಗಿ ಜನಸೇವೆವಮಾಡುವಂತಾಗಲಿ ಎಂದು ಆಶಿಸಿದರು.
ಅವಕಾಶ ಸಿಕ್ಕರೆ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧೆ ಖಚಿತ : ಸನ್ಮಾನ ಸ್ವೀಕರಿಸಿದ ಹೆಚ್.ಎನ್.ವಿಜಯಕುಮಾರ್ ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅವಕಾಶ ಸಿಕ್ಕರೆ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ಅಭಿಮಾನಿಗಳು ಬಯಸಿದಂತೆ ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಅವಕಾಶ ಸಿಕ್ಕರೆ ಅಭಿಮಾನಿಗಳ ತೀರ್ಮಾನದಂತೆ ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಇಂಗಿತ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹೆಚ್.ಎನ್.ವಿಜಯಕುಮಾರ್ ಅಭಿಮಾನಿಗಳ ಬಳಗದ ಅಧ್ಯಕ್ಷ ರಾಜೇಂದ್ರ, ರಘುಮೇಸ್ತ್ರಿ, ಮಾದೇಶ್ ಉಪ್ಪಾರ್, ಕೆಂಪರಾಜು, ಗೋವಿಂದ ಶೆಟ್ಟಿ, ಯಾರಿಸ್ವಾಮಿ ಬಳ್ಳಾರಿ, ಮಹದೇವಶೆಟ್ಟಿ, ವೈ.ಬಿ.ಮಹೇಶ್, ನಾಗರತ್ನ, ರಾಜು, ಸೋಮಣ್ಣ, ನಂದಿನಿ, ಲಕ್ಷ್ಮಿ, ರಂಗಸ್ವಾಮಿ ಇತರರು ಹಾಜರಿದ್ದರು.