- ಮೈಸೂರು ಸಂಸ್ಥಾನದ ಮಹಾರಾಜರು, ಚಾಮರಾಜನಗರ ನಿರ್ಮಾತೃ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ಹಾಗೂ ಜಯಚಾಮರಾಜೇಂದ್ರ ಒಡೆಯರ್ ರವರ ಸ್ಮರಣೆ ಕಾರ್ಯಕ್ರಮ
ಚಾಮರಾಜನಗರ : ಮೈಸೂರಿನ ರಾಜಮನೆತನದ ಕೊಡುಗೆ ನಾಡಿಗೆ ಅಪಾರವಾದದ್ದು, ಅವರು ಕೇವಲ ಆಡಳಿತಗಾರರಷ್ಟೆ ಅಲ್ಲದೆ ನಾಡಿನ ಕಲೆ, ಶಿಕ್ಷಣ, ಕೈಗಾರಿಕೆ ಮತ್ತು ನೀರಾವರಿಗೆ ಭದ್ರ ಅಡಿಪಾಯ ಹಾಕಿಕೊಟ್ಟ ದೂರದೃಷ್ಠಿಯ ಚಿಂತಕರಾಗಿದ್ದರು ಎಂದು ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ವತಿಯಿಂದ ನಡೆದ ಮೈಸೂರು ಸಂಸ್ಥಾನದ ಮಹಾರಾಜರು, ಮುಮ್ಮಡಿ ಕೃಷ್ಣರಾಜ ಒಡೆಯರ್ ಹಾಗೂ ಜಯಚಾಮರಾಜೇಂದ್ರ ಒಡೆಯರ್ ರವರ ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಮ್ಮಡಿ ಕೃಷ್ಣರಾಜ ಒಡೆಯರ್ ರವರ ಸಾಧನೆಯನ್ನು ನಾವೆಲ್ಲರೂ ನೋಡುತ್ತಿದ್ದೇವೆ ಜೊತೆಗೆ ಅನುಭವಿಸುತ್ತಿದ್ದೇವೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಸರ್ ಎಂ.ವಿಶ್ವೇಶ್ವರಯ್ಯನವರ ನೇತೃತ್ವದಲ್ಲಿ ಕೆಆರ್‌ಎಸ್ ಜಲಾಶಯ ನಿರ್ಮಿಸಿದರು. ಅ ಮೂಲಕ ಮೈಸೂರು, ಚಾಮರಾಜನಗರ, ಬೆಂಗಳೂರು ಸೇರಿದಂತೆ ತಮಿಳುನಾಡಿಗೂ ನೀರಾವರಿ ಸೌಲಭ್ಯವಾಗಿದೆ. ಇಲ್ಲದಿದ್ದರೆ ರಾಜ್ಯ ಜನರು.. ಕುಡಿಯುವ ನೀರಿಗೆ ಪರಿತಪ್ಪಿಸು ಕೆಲಸವಾಗುತ್ತಿತ್ತು ಎಂದರು. ಅಲ್ಲದೆ ಅತ್ಯಂತ ಸೀಮಿತ ಅವಧಿಯಲ್ಲಿಯೇ ಮುಮ್ಮಡಿ ಕೃಷ್ಣರಾಜರ ಜನಪರವಾಗಿತ್ತು. ಅವರ ಕಾಲದಲ್ಲಿ ಶಿಕ್ಷಣ, ಆರೋಗ್ಯ ಕೇತ್ರಕ್ಕೂ ಒತ್ತು ನೀಡಿದರು. ಅವರ ಕಾಲದಲ್ಲಿಯೇ ಮೈಸೂರು ನಗರದಲ್ಲಿ ಪ್ರಥಮವಾಗಿ ವೈದ್ಯ ಶಾಲೆಗಳು, ಆಂಗ್ಲ ವಿದ್ಯಾಭ್ಯಾಸಕ್ಕಾಗಿ ಶಾಲೆಗಳನ್ನು ಆರಂಭಿಸಿದ್ದರು ಎಂದರು. ಅದೇ ರೀತಿಯಲ್ಲಿ. ಜಯಚಾಮರಾಜ ಒಡೆಯರ್ ಮೈಸೂರು ಸಂಸ್ಥಾನದ 25ನೇ ಕೊನೆಯ ಮಹಾರಾಜರಾಗಿದ್ದರು. ಅವರು 1950ರಿಂದ 1956ರ ವರಗೆ ರಾಜ್ಯಬಾರ ಭಾರ ನಡೆಸಿದರು. ಕರ್ನಾಟಕ ಸ್ಥಾಪನೆಯ ನಂತರ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು ಎಂದರು.
ದಲಿತ ಮಹಾಸಭಾ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ ಪಾಪು ಮಾತನಾಡಿ, ಸುಮಾರು 750 ವರ್ಷಗಳ ಸುದೀರ್ಘ ಆಡಳಿತ ನಡೆಸಿ, 25 ಮಹಾರಾಜರನ್ನು ಕಂಡಂತಹ ಮೈಸೂರು ಸಂಸ್ಥಾನ ನಾವೆಲ್ಲರೂ ಸ್ಮರಿಸಿಕೊಳ್ಳಬೇಕು. ಮಹಾರಾಜರಷ್ಟೆ ಮಹಾರಾಣಿಯರು ಜನಪರ ಉತ್ತಮ ಸೇವೆ ನೀಡಿದ್ದಾರೆ. ಎಂದರು. ಮೈಸೂರು ಸಂಸ್ಥಾನ ಅದ್ಭುತವಾದ ಕೊಡುಗೆಗಳನ್ನು ಜನರಿಗೆ ಕೊಟ್ಟಿದ್ದಾರೆ’ ಎಂದರು.
ರಾಜಮನೆತನ ಇರುವುದೇ ತಮ್ಮ ಆಡಂಬರದ ಜೀವನಕ್ಕೆ ನಡೆದ ಹಲವಾರು ರಾಜಮನೆತನಗಳಿರುವುದನ್ನು ನೋಡಿದ್ದೇವೆ ನಾವು ಆದರೆ ಮೈಸೂರು ಸಂಸ್ಥಾನದ 25 ಮಹಾರಾಜರ ಪೈಕಿಯಲ್ಲಿ ಎಲ್ಲೂ ಒಂದು ಕಪ್ಪುಚುಕ್ಕಿಬಾರದ ರೀತಿಯಲ್ಲಿ ಉತ್ತಮ ಆಡಳಿತವನ್ನು ನೀಡಿದ್ದಾರೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ್ ಋಗ್ವದಿ ಮಾತನಾಡಿ, ಶ್ರೀ ಚಾಮರಾಜೇಶ್ವರಸ್ವಾಮಿ ದೇವಸ್ಥಾನಕ್ಕೆ 200 ವರ್ಷಗಳ ಸುಸಂದರ್ಭದಲ್ಲಿ ಚಾಮರಾಜನಗರದಲ್ಲಿ ಅತ್ಯಂತ ಅದ್ಭುತವಾದ ಮೈಸೂರು ಸಂಸ್ಥಾನಕ್ಕೆ ಗೌರವ ಸಮರ್ಪಣೆ ಆಗಬೇಕು. ನಮ್ಮ ಜೀವನ ಪಾವನ ಆಗಬೇಕು ಎಂದರು.
ಉದ್ಯಮಿ ಶ್ರೀನಿಧಿ. ಕುದರ್ ಮಾತನಾಡಿ, ಮೈಸೂರು ಸಂಸ್ಥಾನದ 25 ಮಹಾರಾಜರು ದೇಶಕ್ಕೆ ಮಾದರಿ ಆಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಖಿಲ ಕರ್ನಾಟಕ ಕನ್ನಡ ಮಹಾಸಭಾ ಅಧ್ಯಕ್ಷ ಶ್ರೀನಿವಾಸಗೌಡ ಮಾತನಾಡಿ, ಮುಮ್ಮಡಿ ಕೃಷ್ಣರಾಜ ಒಡೆಯರ್ ಚಾಮರಾಜನಗರ ಎಂದು ನಾಮಕರಣ ಮಾಡಿದರು. ಕಾರಣ ಅವರ ತಂದೆ 9ನೇ ಖಾಸ ಚಾಮರಾಜೇಂದ್ರ ಒಡೆಯರ್ ಚಾಮರಾಜನಗರದಲ್ಲಿ ಜನಿಸಿದರಿಂದ ಅವರ ಸವಿನೆಪಿಗಾಗಿ ಈ ಊರನ್ನು ಚಾಮರಾಜನಗರ ಎಂದು ಹೇಳಿ ಬದಲಾಯಿಸಿದರು. ಎಂದರು. ಮುಮ್ಮಡಿ ಕೃಷ್ಣರಾಜ ಒಡೆಯರ್ ಚಾಮರಾಜೇಶ್ವರ ದೇವಸ್ಥಾನ ನಿರ್ಮಾಣ ಮಾಡಿದರು ಎಂದರು.
ಸಮಾಜ ಸೇವಕ ಜಿ.ವಿ ವೆಂಕಟನಾಗಪ್ಪ ಶೆಟ್ಟಿ ಮಾತನಾಡಿ ಚಾಮರಾಜೇಶ್ವರ ರಥ ಕಟ್ಟುವವರನ್ನು ಹಾಗೂ ಆರ್ಚಕರನ್ನು ಗುರುತಿಸಿ ಸನ್ಮಾನಿಸಿರುವುದು ಒಂದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ ಎಂದರು.
ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ಗೌರವಾಧ್ಯಕ್ಷ ಶಾ.ಮುರಳಿ ಪ್ರಾಸ್ತಾವಿಕ ಭಾಷಣ ಮಾಡಿದರು.
ಸನ್ಮಾನ.: ಚಾಮರಾಜೇಶ್ವರ ರಥ ಕಟ್ಟುವ ಪ್ರಭುಸ್ವಾಮಿ, ಆರ್ಚಕರಾದ ಮೋಹನ್ ರಾವ್,
ಆನಂತಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಸಭಾ ಮಾಜಿ ಸದಸ್ಯ
ಗಣೇಶ್ ದೀಕ್ಷಿತ್, ಅಖಿಲ ಕರ್ನಾಟಕ ಕನ್ನಡ ಮಹಾಸಭಾ ಪ್ರಧಾನ ಕಾರ್ಯದರ್ಶಿ ಚಾ.ವೆಂ.ರಾಜ್‌ಗೋಪಾಲ್, ನಗರಸಭಾ ಮಾಜಿ ಸದಸ್ಯ ಚಂದ್ರಶೇಖರ್, ಆರ್.ರಾಚಪ್ಪ, ನಿಜಧ್ವನಿಗೊವಿಂದರಾಜು, ಪಣ್ಯದಹುಂಡಿರಾಜು, ಲೋಕೇಶ್ ಹೊಮ್ಮ, ಅರುಣಕುಮಾರ್‌ಗೌಡ, ರವಿಚಂದ್ರಪ್ರಸಾದ್, ರಂಗಸ್ವಾಮಿ, ಆಟೋ ಲಿಂಗರಾಜು ಇತರರು ಹಾಜರಿದ್ದರು.