ನೆಮ್ಮದಿ ಪ್ರತಿಯೊಬ್ಬರ ಜೀವನಕ್ಕೂ ಬಹಳ ಮುಖ್ಯ : ಎನ್.ಮಹೇಶ್

  • ಉತ್ತುವಳ್ಳಿಯಲ್ಲಿ ಹಿರಿಯ ನಾಗರಿಕರ ಆರೈಕೆ ನೆಮ್ಮದಿ ಕೇಂದ್ರ ಉದ್ಘಾಟನೆ
  • ಬ್ಯಾಂಕ್ ಆಫ್ ಬರೋಡದಿಂದ ನೆಮ್ಮದಿ ಕೇಂದ್ರಕ್ಕೆ ವಾಷಿಂಗ್ ಮಿಷನ್ ಕೊಡುಗೆ

ಚಾಮರಾಜನಗರ: ಮನಸ್ಸಿನ ಶಾಂತಿ, ನೆಮ್ಮದಿ ಪ್ರತಿಯೊಬ್ಬರ ಜೀವನಕ್ಕೂ ಬಹಳ ಮುಖ್ಯವಾಗಿದೆ ಎಂದು ಮಾಜಿ ಸಚಿವರು, ಬಿಜೆಪಿ ರಾಜ್ಯಾ ಉಪಾಧ್ಯಕ್ಷ ಎನ್.ಮಹೇಶ್ ಹೇಳಿದರು.
ತಾಲೂಕಿನ ಉತ್ತುವಳ್ಳಿ ಕೆಎಸ್‌ಎಸ್‌ಐಡಿಸಿ ಲೇಔಟ್ ಹಿಂಭಾಗದಲ್ಲಿ ಆಶ್ರಯ ಸೇವಾ ಚಾರಿಟೇಬಲ್ ಟ್ರಸ್ಟ್, ಫೆವಾರ್ಡ್-ಕ ಹಾಗೂ ಡೀಮ್ ಇಂಡಿಯಾ ನೆಟ್‌ವರ್ಕ್ ಸಹಯೋಗದಲ್ಲಿ ಆರಂಭವಾಗಲಿರುವ ಹಿರಿಯ ನಾಗರೀಕರ ಆರೈಕೆ ನೆಮ್ಮದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಸಾಮಾನ್ಯವಾಗಿ ಇಂತಹ ಆಶ್ರಯಸ್ಥಾನಗಳಿಗೆ ವೃದ್ದಾಶ್ರಮ, ಅನಾಥಾಶ್ರಮ ಎಂದು ಹೆಸರು ಇಡುತ್ತಾರೆ ಆದರೆ ಆಶ್ರಯ ಸೇವಾ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ರಮೇಶ್‌ ಪ್ರಭು ನೆಮ್ಮದಿ ಎಂದು ಅತ್ತುತ್ತಮವಾದ ಹೆಸರು ಇಟ್ಟಿದ್ದಾರೆ. ರಮೇಶ್‌ ಪ್ರಭು ಅವರು ನಿರಾಶ್ರಿತರು, ಮನೆ ಬಿಟ್ಟಿರವರಿಗೆ ನೆಮ್ಮದಿ ಕೊಡುವ ಕೆಲಸ ಮಾಡುತ್ತಿರುವುದು ಒಂದು ಪುಣ್ಯದ ಕೆಲಸವಾಗಿದೆ ಇದಕ್ಕೆ ಎಲ್ಲರ ಸಹಕಾರ
ಅಗತ್ಯವಾಗಿದೆ ಎಂದರು.
ನೆಮ್ಮದಿ ಮನೆಯಲ್ಲೂ ಸಾಮರಸ್ಯ ಇದ್ದಾಗ ನೆಮ್ಮದಿ ಇರುತ್ತದೆ. ಹಗಲಿನಲ್ಲಿ ನೆಮ್ಮದಿ ಇಲ್ಲದಿದ್ದರೆ. ರಾತ್ರಿ ಮಲಗುವಾಗ ನೆಮ್ಮದಿ ಸಿಗೋದಿಲ್ಲ ಸಮಾಜದಲ್ಲಿ ನೆಮ್ಮದಿ ಬದುಕು ಆಗಬೇಕಾದರೆ ಪ್ರತಿಯೊಬ್ಬರೂ ಹಗಲಿನಲ್ಲಿ ನೆಮ್ಮದಿ ಅಗತ್ಯ ಅಂತಹ ಕೆಲಸವನ್ನು ಆಶ್ರಯ ಸೇವಾ ಚಾರಿಟೇಬಲ್ ಟ್ರಸ್ಟ್ ಮಾಡುತ್ತಿದೆ ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಹರವೆ ವಿರಕ್ತಮಠದ ಶ್ರೀಸರ್ಪಭೂಷಣಸ್ವಾಮೀಜಿ, ಚುಂಚನಹಳ್ಳಿ ಮತ್ತು ನವಿಲೂರು ಪಟ್ಟದ ಮಠದ ಚನ್ನಬಸವಸ್ವಾಮೀಜಿ ದಿವ್ಯಸಾನಿಧ್ಯವಹಿಸಿದ್ದರು. ಮಿಮಿಕ್ರಿ ಗೋಪಿ ನಾಮಫಲಕ ಅನಾವರಣಗೊಳಿಸಿದರು. ಚಾಮರಾಜನಗರ ಬ್ಯಾಂಕ್ ಆಫ್ ಬರೋಡ ವ್ಯವಸ್ಥಾಪಕ ಶ್ರೀಧರಮೂರ್ತಿ ನೆಮ್ಮದಿ ಆರೈಕೆ ಕೇಂದ್ರಕ್ಕೆ ವಾಷಿಂಗ್ ಮಿಷನ್ ಕೊಡುಗೆಯಾಗಿ ನೀಡಿದರು.
ಫೆವಾರ್ಡ್-ಕ. ಜಿಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಎನ್.ಮಂಟೇಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಕೆ.ರವಿಕುಮಾರ್, ಪರಿಸರಪ್ರೇಮಿ ವೆಂಕಟೇಶ್, ದಲಿತ ಮಹಾಸಭಾ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ ಪಾಪು, ದೇಬೂರು ಅಶೋಕ್, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಯುವ ಘಟಕದ ರಾಜ್ಯ ಕಾರ್ಯದರ್ಶಿ ಹೆಚ್.ಎಂ.ಪ್ರಣವ್, ಉದ್ಯಮಿ ಫಣಿರಾಜ್‌ಮೂರ್ತಿ, ಹಾಸ್ಯ ಕಲಾವಿದ ಉಮ್ಮತ್ತೂರು ಬಸವರಾಜು, ಶೋಭಾ, ಭಾಸ್ಕರ್, ಟ್ರಸ್ಟ್ ನ ಗೌರವಾಧ್ಯಕ್ಷ ಗುರುಸ್ವಾಮಿ, ಅಧ್ಯಕ್ಷ ರಮೇಶ್‌ ಪ್ರಭು, ಮನು, ಸುರೇಶ್‌ನಾಗ್, ಪ್ರಕಾಶ್, ಅಂಬರೀಶ್, ಮಹದೇವಪ್ಪ, ರವಿಕುಮಾರ್, ಗಾಯಿತ್ರಿ, ತ್ರಿವೇಣಿ, ಜಯಮ್ಮ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *