- ನಮ್ಮ ಭಯನೇ ಭೂತ, ಹಿಂಜರಿಕೆಯೇ ದೆವ್ವ.
ಚಾಮರಾಜನಗರ : ದೆವ್ವನೂ ಇಲ್ಲ, ಭೂತನೂ ಇಲ್ಲ ಎಲ್ಲ ಬರೀ ಬುರುಡೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ ಅಧ್ಯಕ್ಷ ಹುಲಿಕಲ್ ನಟರಾಜು ಹೇಳಿದರು.
ತಾಲೂಕಿನ ವೆಂಕಟಯ್ಯನಛತ್ರದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿಜ್ಞಾನ ಪ್ರಯೋಗಾಲಯಕ್ಕೆ ಭೇಟಿ ವೀಕ್ಷಿಸಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿ, ದೆವ್ವ ಎಂಬುವುದು ಜನರ ನಂಬಿಕೆ ಮತ್ತು ಮನಸ್ಸಿನ ಭಯಕ್ಕೆ ಸಂಬಂಧಿದ್ದಾಗಿದೆಯೇ ಹೊರತು ವೈಜ್ಞಾನಿಕವಾಗಿ ಅದಕ್ಕೆ ಯಾವುದೇ ಅಸ್ತಿತ್ವವಿಲ್ಲ. ದೆವ್ವ, ಭೂತ, ಪಿಶಾಚಿ ಬರೀ ಬುರುಡೆಯಾಗಿದೆ ಎಂದರು.
ಮಾಟ, ಮಂತ್ರ, ವಾಮಾಚಾರ ಸುಳ್ಳು. ನಮ್ಮ ಭಯನೇ ಭೂತ, ಹಿಂಜರಿಕೆಯೇ ದೆವ್ವವಾಗಿದೆ. ವಿಜ್ಞಾನ ನಂಬಿ, ಎಲ್ಲವನ್ನೂ ದೂರ ಮಾಡಿ ಮನುಷ್ಯರಾಗಿ ಬದುಕಿ ಭಯಮುಕ್ತ ಸಮಾಜ ನಿರ್ಮಾಣ ಮಾಡುವವರು ಆಗಬೇಕು. ನಿರ್ಭೀತಿಯಿಂದ ಬದಕಬೇಕು. ಮಾನವೀಯತೆ ಯಿಂದ ಬದುಕಬೇಕು ಎಂದು ರಾಜ್ಯ ಸಂಶೋಧನ ಪರಿಷತ್ ಹುಟ್ಟುಹಾಕಲಾಗಿದ್ದು, 32 ಪುಸ್ತಕ ಬರೆದಿದ್ದೇವೆ. 6 ಪುಸ್ತಕಗಳನ್ನು ಎಲ್ಲ ಶಾಲೆಗಳಿಗೆ ಕೊಡಲು ಚಿಂತನೆ ಮಾಡಿದ್ದೇವೆ. ಎಲ್ಲ ವಿದ್ಯಾರ್ಥಿಗಳು ಆದರ್ಶ ಬದುಕಬೇಕು ಎಂದರು.
ಶೂನ್ಯದಿಂದ ಏನನ್ನು ಸೃಷ್ಠಿಸಲು ಸಾಧ್ಯ ಇಲ್ಲ ಎಂಬುವುದನ್ನು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ ರಾಜ್ಯ ಸಹ ಕಾರ್ಯದರ್ಶಿ ಮಂಜುನಾಥ ಸ್ವಾಮಿ, ಜಿಲ್ಲಾಧ್ಯಕ್ಷ ಕಿರಣ್ ರಾಜ್, ಜಿಲ್ಲಾ ಕಾರ್ಯದರ್ಶಿ ನಂಜುಂಡಸ್ವಾಮಿ, ಪ್ರಾಂಶುಪಾಲ ಮಲ್ಲೇಶ್, ಉಪನ್ಯಾಸಕ ಪ್ರಶಾಂತ್, ಶಿಕ್ಷಕರಾದ ಸುಧಾಕರ, ಮಂಜುಳ, ಕನಕವತಿ ಹಾಗೂ ವಿದ್ಯಾರ್ಥಿಗಳು ಇತರರು ಹಾಜರಿದ್ದರು.
