ಚಾಮರಾಜನಗರ: ಸಂಕ? ಪರಿಹಾರನಿಧಿಯೋಜನೆಯಡಿ ಮೀನುಗಾರಿಕೆ ನಡೆಸುವ ಸಂದರ್ಭದಲ್ಲಿ ಮೃತಪಟ್ಟತಾಲ್ಲೂಕಿನ ಅಟ್ಟುಗೂಳಿಪುರದ ನಿವಾಸಿ ಶಿವಸ್ವಾಮಿ ಕುಟುಂಬಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರುನಗರದ ಪ್ರವಾಸಿಮಂದಿರದಲ್ಲಿ ೧೦ ಲಕ್ಷ ರೂ.ಗಳ ಪರಿಹಾರದಚೆಕ್ ನೀಡಿದರು.
ಇದೇವೇಳೆ ಅವರು ಮಾತನಾಡಿ, ತಾಲ್ಲೂಕಿನ ಅಟ್ಟುಗೂಳಿಪುರದ ಶಿವಸ್ವಾಮಿ ಸುವರ್ಣಾವತಿಜಲಾಶಯದಲ್ಲಿ ಮೀನುಹಿಡಿಯುವ ವೃತ್ತಿ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಶಿವಸ್ವಾಮಿ ಮೃತಪಟ್ಟಿದ್ದರು.ಇವರಿಗೆ ಸೂಕ್ತ ಪರಿಹಾರನೀಡುವಂತೆ ಮೀನುಗಾರಿಕೆ ಇಲಾಖೆಗೆ ಅರ್ಜಿ ಸಲ್ಲಿಕೆಯಾಗಿತ್ತು.
ಇಲಾಖೆಯಿಂದ ಮೃತರಕುಟುಂಬಕ್ಕೆ ೧೦ಲಕ್ಷರೂ. ಮಂಜೂರಾಗಿದ್ದು, ಶಿವಸ್ವಾಮಿ ಪತ್ನಿ ಬಸಮಣಿಅವರಿಗೆ ವಿತರಣೆ ಮಾಡಲಾಗಿದೆಎಂದರು.
ಇದೇವೇಳೆ ಚಾಮರಾಜನಗರ ವಿಧಾನ ಸಭಾಕ್ಷೇತ್ರಕ್ಕೆ೨೦೨೫-೨೬ ನೇ ಸಾಲಿನ ರಾಜ್ಯವಲಯ ಮತ್ತುಜಿಲ್ಲಾವಲಯ ಸೇರಿಒಟ್ಟು ೨೩ ಮೀನುಗಾರರಿಗೆತಲಾ ೧೦ ಸಾವಿರ ಮೌಲ್ಯದ ಮೀನುಗಾರಿಕೆ ಸಲಕರಣೆಕಿಟ್ಸ್, ಫೈಬರ್‌ಗ್ಲಾಸ್ ಹರಿಗೋಲು ವಿತರಿಸಿದರು.
ಮೀನುಗಾರರುಇಲಾಖೆಯಿಂದ ನೀಡಿರುವ ಸಲಕರಣೆಗಳನ್ನು ಹಾಳಾಗದಂತೆ ಕಾಪಾಡಿಕೊಳ್ಳಬೇಕು, ಇವುಗಳನ್ನು ಸದ್ಬಳಕೆ ಮಾಡಿಕೊಂಡು, ಆರ್ಥಿಕವಾಗಿ ಸಬಲರಾಗಬೇಕು, ಮೀನು ಹಿಡಿಯುವ ಸಂದರ್ಭದಲ್ಲಿ ಮುಂಜಾಗ್ರತೆಕ್ರಮವಹಿಸಬೇಕು. ಮಳೆಗಾಳಿ ಎದುರಾದಾಗ ನದಿಗೆ ಇಳಿಯದಂತೆ ಎಚ್ಚರವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಎಸ್. ವಿವೇಕ್‌ಸಹಾಯಕಶ್ರೀನಿವಾಸ, ಉಮೇಶ್ ಸಿಬ್ಬಂದಿ ವರ್ಗ ಹಾಗೂ ಮೀನುಗಾರರು ಹಾಜರಿದ್ದರು.